ಉeóÉ್ಬಕಿಸ್ತಾನ್
 	ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟದ ಒಂದು ರಾಜ್ಯ. ಅಧಿಕೃತ ಹೆಸರು ಉಜ್ಬೆಕ್ ಸೋವಿಯತ್ ಸಮಾಜವಾದಿ ಗಣರಾಜ್ಯ. ದಕ್ಷಿಣದಲ್ಲಿ ಆಫ್ಘಾನಿಸ್ತಾನವೂ ಉಳಿದ ಮೂರು ದಿಕ್ಕುಗಳಲ್ಲಿ ಕಾಜಾóಕ್‍ಸ್ತಾನ್, ಕಿರ್ಗಿಷ ತಾಜಿಕಿಸ್ತಾನ್, ಟರ್ಕ್‍ಮೆನಿಸ್ತಾನ್‍ಗಳೂ ಸುತ್ತುವರಿದಿರುವ ಈ ರಾಜ್ಯ 38ಔ ಉ.-45ಔ ಉ. ಹಾಗೂ 36ಔ ಪೂ-72ಔ ಪೂ. ನಡುವೆ, ಸೋವಿಯತ್ ಮಧ್ಯ ಏಷ್ಯದ ಆಗ್ನೇಯ ಭಾಗದಲ್ಲಿ. ಹಬ್ಬಿದೆ. ಉಜೆó್ಜಕ್ ಜನರಿರುವ ಭಾಗಗಳನ್ನೆಲ್ಲ ಒಳಗೊಂಡಿರುವ ಈ ರಾಜ್ಯದ ಎಲ್ಲೆ ಅಂಕುಡೊಂಕು. 1924ರಲ್ಲಿ ಸ್ಥಾಪಿತವಾದ ಈ ಒಕ್ಕೂಟ ಗಣರಾಜ್ಯದ ವಿಸ್ತೀರ್ಣ 1,73,500 ಚ.ಮೈ. (4,49,600 ಚ.ಕಿ.ಮೀ.). ರಾಜಧಾನಿ ಟಾಷ್ಕೆಂಟ್.

	ಭೂವಿವರಣೆ: ಈ ಪ್ರದೇಶದ ಪೂರ್ವಭಾಗದಲ್ಲಿ ಟಯೆನ್ಷಾನ್ ಪರ್ವತದ ಕವಲುಗಳು ಒಳನುಗ್ಗಿವೆ. ಈ ರಾಜ್ಯದ ಬಹುಭಾಗ ಬೆಟ್ಟಗುಡ್ಡಗಳಿಂದ ಕೂಡಿದ ಮೈದಾನ; ನೆಲದ ಬಹುಭಾಗ ಮುರುಭೂಮಿಮಯ. ನಡುನಡುವೆ ಇರುವ ಓಯಸಿಸ್ಸುಗಳ ಪೈಕಿ ಫರ್ಗನ್ ಕಣಿವೆಯದು ಅತಿ ದೊಡ್ಡದು. ಇದರ ಸುತ್ತ ಎತ್ತರ ಪರ್ವತಗಳಿವೆ. ಅನೇಕ ಸಣ್ಣ ನದಿ ತೊರೆಗಳು ಇಲ್ಲಿನ ಪರ್ವತ ಪ್ರದೇಶಗಳನ್ನು ಸುತ್ತುವರಿದು ಹರಿಯುತ್ತವÉ. ಉತ್ತರದಲ್ಲಿರುವ ಆರಲ್ ಸಮುದ್ರದ ಪಶ್ಚಿಮ ತೀರದ ಉದ್ದಕ್ಕೂ ಹಬ್ಬಿರುವ ಊಸ್ಟ್‍ಯರ್ಟ್ ಪ್ರಸ್ಥಭೂಮಿ ಸಮುದ್ರಮಟ್ಟಕ್ಕಿಂತ 600'-900' ಎತ್ತರವಾಗಿದೆ. ಸಮುದ್ರದ ಕಡೆಗೆ ಇದು ಹೆಚ್ಚು ಇಳಿಜಾರಾಗಿದೆ. ಖನಿಜ ಸಂಬಂಧಿ ಲವಣಗಳಿರುವ ಆರಲ್ ಸಮುದ್ರ ಎಲ್ಲೂ 60' ಗಿಂತ ಹೆಚ್ಚು ಆಳವಿಲ್ಲ. 

	ಆರಲ್ ಸಮುದ್ರಕ್ಕೂ ಪರ್ವತ ತಪ್ಪಲುಗಳಿಗೂ ಮಧ್ಯ 300 ಮೈಲಿ ವಿಸ್ತಾರದ ಪ್ರದೇಶ ಕಿಜಿóಲ್‍ಕುಂ. ಮರಳು ತುಂಬಿದ ಈ ಪ್ರದೇಶದಲ್ಲಿ ಸಣ್ಣ ಸಣ್ಣ ಹುಲ್ಲುಜಾತಿಯ ಸಸ್ಯಗಳಿವೆ. ಅಲ್ಲಲ್ಲಿ ಎತ್ತರದ ಮರಳುದಿಣ್ಣೆಗಳಿವೆ. ಈ ಪ್ರದೇಶದ ಎತ್ತರ ಸಾಮಾನ್ಯವಾಗಿ 600 ಅಡಿಗಳಿಗಿಂತ ಕಡಿಮೆ, ಅಮೂದಾರ್ಯ ಈ ಪ್ರದೇಶದ ಪ್ರಮುಖ ನದಿ. ಇದು ಕಸಕಡ್ಡಿ ಶೇಖರಿಸುತ್ತಿದ್ದು ವರ್ಷವರ್ಷವೂ ತನ್ನ ಪಾತ್ರವನ್ನು ಬದಲಾಯಿಸುತ್ತಿರುತ್ತದೆ. ಈ ನದಿಯಲ್ಲಿನ ಪ್ರವಾಹ ಋತುಮಾನಾನುಸಾರವಾದದ್ದು.

	ಕಿಜಿóಲ್‍ಕುಂ ದಕ್ಷಿಣಕ್ಕೆ ಫಲವತ್ತಾದ ಮೆಕ್ಕಲುಮಣ್ಣಿನಿಂದ ಕೂಡಿದ ಒಂದು ಮೈದಾನ ಪ್ರದೇಶವಿದೆ. ಟಾಷ್ಕೆಂಟಿನ ಆಗ್ನೇಂiÀiಭಾಗಕ್ಕಿರುವ ಚಟ್‍ಕಲ್ ಶ್ರೇಣಿಯಲ್ಲಿ ಹುಟ್ಟಿ ಈ ನಗರದ ಸುತ್ತಣ ಓಯಸಿಸ್ಸುಗಳಿಗೆ ನೀರುಣಿಸುವ ಚಿರ್‍ಚಿಕ್, ಆಂಗ್ರೆನ್‍ಗಳು ಸೀರ್ ಧಾರ್ಯಾ ನದಿಯ ಉಪನದಿಗಳು. ಫರ್ಗನ್ ಕಣಿವೆಯನ್ನು ಸುತ್ತುವರಿದಿರುವ ಇತರ ಪರ್ವತಶ್ರೇಣಿಗಳಲ್ಲೂ ಅನೇಕ ಸಣ್ಣಪುಟ್ಟ ನದಿಗಳು ಹರಿದು ಬಂದು ಮುಖ್ಯ ನದಿಯಾದ ಅಮೂದಾರ್ಯವನ್ನು ಸೇರುತ್ತವÉ.

	ಉeóÉ್ಚಕಿಸ್ತಾನದ ಮೇಲ್ಮೈ ಒಂದೇ ಸಮನಾಗಿಲ್ಲವಾದ್ದರಿಂದ ಈ ರಾಜ್ಯದ ವಾಯುಗುಣದಲ್ಲಿ ಪ್ರಾದೇಶಿಕ ಭಿನ್ನತೆ ಬಹಳ. ಚಳಿಗಾಲದಲ್ಲಿ ಉಷ್ಣತೆಯ ವ್ಯತ್ಯಾಸದ ಗತಿ ತೀವ್ರ. ಫೆಬ್ರವರಿಯಲ್ಲಿ ಒಂದು ದಿನ ಹಿಮಪಾತವಾದರೆ ಇನ್ನೊಂದು ದಿನವಿಡೀ ಮಳೆ, ಮತ್ತೊಂದು ದಿನ ಹಿತಕರ ಹವಾಗುಣ, ಶಾಖ ಹೆಚ್ಚು, ಇರಾನ್ ಮತ್ತು ಆಫ್ಘಾನಿಸ್ತಾನದ ಕಡೆಯಿಂದ ಬೀಸುವ ಅವರ್ತಮಾರುತಗಳು ಇದಕ್ಕೆ ಕಾರಣ. ಉತ್ತರ ಧ್ರುವಪ್ರದೇಶದಿಂದ ಕುಳಿರ್ಗಾಳಿ ಬೀಸಿದಾಗ ಚಳಿಗಾಲದಲ್ಲಿ ಟಾಷ್ಟೆಂಟಿನ ಉಷ್ಣಾಶ 14ಔ ಫ್ಯಾ.ಗೆ ಇಳಿಯುತ್ತದೆ. ಆದರೆ ಆಫ್ಗಾನಿಸ್ತಾನದಿಂದ ಉಷ್ಣಮಾರುತ ಬೀಸಿದಾಗ 68ಔ ಫ್ಯಾ.ಗೆ ಇರುತ್ತದೆ. ಚಳಿಗಾಲ ಮೋಡರಹಿತ ಹಿಮ ಬೀಳುವುದು ಚಳಿಗಾಲದಲ್ಲಿ ಐದು ದಿನ ಮಾತ್ರ..

	ವಸಂತಋತುವಿನಲ್ಲಿ ಆಕಾಶ ಸ್ವಚ್ಛ. ದಿನಗಳು ಹೆಚ್ಚು ಪ್ರಕಾಶಮಾನ. ವಾಯುಶುಷ್ಕ, ಶಾಖ ಹೆಚ್ಚು. ಏಪ್ರಿಲ್ ತಿಂಗಳಿನಲ್ಲಿ ವಾಯುವಿನ ತೇವಾಂಶ 30%. ಜುಲೈ ತಿಂಗಳಿನ ಸಾಧಾರಣ ಬೇಸಗೆಯಲ್ಲಿ ಇಡೀ ಸೋವಿಯತ್ ಒಕ್ಕೂಟದಲ್ಲಿ ಉಜû್ಜಕಿಸ್ತಾನದಲ್ಲೇ ಹೆಚ್ಚು ಶಾಖ. ಆಗ ಇದರ ಉಷ್ಣತೆಯ ವ್ಯಾಪ್ತಿ 88ಔ - 113ಔ ಫ್ಯಾ. ಟಾಷ್ಕೆಂಟಿನ ಉಷ್ಣತೆ 105ಔ ಫ್ಯಾ., ಮರುಭೂಮಿಯಲ್ಲಿ ಜುಲೈ ಉಷ್ಣತೆ 80ಔ - 105ಔ ಫ್ಯಾ. ದೂಳಿನಿಂದ ಕೂಡಿದ ಸುಂಟರಗಾಳಿ ಏಳುವುದುಂಟು. ಆದರೆ ಈ ಗಾಳಿ ಶುಷ್ಕವಾದ್ದರಿಂದ ಮಳೆ ಇಲ್ಲ. ವರ್ಷಕ್ಕೆ 2"ಕ್ಕೂ ಕಡಿಮೆ ಮಳೆ. ಶರದ್‍ಋತುವಿನಲ್ಲಿ ಉಷ್ಣತೆ ಕಡಿಮೆಯಾಗಿ ಮಳೆ ಬೀಳಲುಪಕ್ರಮಿಸುತ್ತದೆ. ಅವರ್ತಮಾರುತಗಳು ಮಳೆ ತರುತ್ತವÉ. ಈ ಪರ್ವತ ಪ್ರದೇಶಗಳಲ್ಲಿ ಮಳೆ ಹೆಚ್ಚು (20"-24).

	ಇಲ್ಲಿ ತಂಡ್ರ ಸಸ್ಯದಿಂದ ಮರುಭೂಮಿ ಸಸ್ಯದವರೆಗೆ ವಿವಿಧ ಜಾತಿಯ ವನಸ್ಪತಿಯುಂಟು. ಉಸ್ಟ್‍ಯರ್ಟ್ ಮತ್ತು ಕಿಜಿóಲ್‍ಕುಂನಲ್ಲಿ ತೆಳ್ಳನೆಯ ಮರುಭೂಮಿ ಸಸ್ಯವಿದೆ. ಕಿಜûಲ್‍ಕುಂಗೂ ಅಮೂ ದಾರ್ಯಾಕ್ಕೂ ನಡುನೆಲದಲ್ಲೂ ಇತರ ತಗ್ಗು ಪ್ರದೇಶಗಳಲ್ಲೂ ಹುಲ್ಲುಗಾವಲು ಧಾರಾಳವಾಗಿದೆ. ದಕ್ಷಿಣದ ಹುಲ್ಲು ಪೊದೆಗಳ ನಡುವೆ ಬಗೆ ಬಗೆ ಹೂ ಬಿಡುವ ಗಿಡಮೂಲಿಕೆಗಳಿವೆ. ಪೂರ್ವ ಉತ್ತರಗಳಲ್ಲಿರುವ ಪರ್ವತ ಸಾನುಪ್ರದೇಶದಲ್ಲಿ ಪಾಪ್ಲರ್, ಆಲಿವ್, ವಿಲ್ಲೂ ಮರಗಿಡಗಳು ಕಾಣಬರುತ್ತವೆ. ನೆಲದ ಎತ್ತರ ಹೆಚ್ಚಿದಂತೆ ಮರ ಕಡಿಮೆ, ಹುಲ್ಲು ಹೆಚ್ಚು; ತುತ್ತತುದಿಯಲ್ಲಿ ತಂಡ್ರ.

	ಹಲ್ಲಿ, ಜಿರ್ಬೋವ (ದಂಶಕ ಜಾತಿ), ಕಿರುಬ ಮತ್ತ ಗುಳ್ಳೆ ನರಿಗಳೂ ವಿರಳವಾಗಿ ಸಿಕ್ಕುವ ಕಾಡುಕತ್ತೆ, ಚಿಗರಿ ಮತ್ತು ಹುಲಿಗಳೂ ಪರ್ವತ ಪ್ರದೇಶಗಳಲ್ಲಿ ಕಾಡುಮೇಕೆ, ಕುರಿ ಮತ್ತು ಚಿರತೆಗಳೂ ಇಲ್ಲಿನ ಪ್ರಾಣಿಗಳು.

	ಪೆಟ್ರೋಲಿಯಂ, ಸ್ವಾಭಾವಿಕ ಅನಿಲ, ತವರ, ಕಲ್ಲಿದ್ದಲು, ಲಿಗ್ನೈಟ್, ತಾಮ್ರ, ಲವಣ, ಗಂಧಕ ಟಂಗ್ಸ್‍ಟನ್, ಮೊಲೆಬ್ಡಿನಂ-ಇವು ಮುಖ್ಯ ಖನಿಜಗಳು.

	ವ್ಯವಸಾಯ, ಕೈಗಾರಿಕೆ, ಜನವಸತಿ: ಕೃಷಿಗೆ ನೀರಾವರಿ ಸೌಲಭ್ಯ ಎಲ್ಲೆಲ್ಲಿ ಸಾಧ್ಯವೂ ಅಲ್ಲೆಲ್ಲ ಅದನ್ನೊದಗಿಸಲಾಗಿದೆ. ಹೆಚ್ಚು ಮಳೆಯಾಗುವ ಎತ್ತರ ಪ್ರದೇಶದಲ್ಲಿ ಒಣ ಬೇಸಾಯ. ಕಾಳು, ಮೆಕ್ಕೆಜೋಳ, ಆಲೂಗೆಡ್ಡೆ ಇವು ಇಲ್ಲಿನ ಉತ್ಪನ್ನ. ವ್ಯವಸಾಯದ ಜೊತೆಗೆ ಪಶುಪಾಲನೆಯೂ ಮುಖ್ಯ ಕಸಬು. ದನಕರು, ಕುರಿ, ಕುದುರೆ ಸಾಕುಪ್ರಾಣಿಗಳು. ನದೀಬಯಲುಗಳ ನೀರಾವರಿ ಪ್ರದೇಶದಲ್ಲಿ ಗೋಧಿ, ಬತ್ತ, ಬಾರ್ಲಿ, ಹೊಗೆಸೊಪ್ಪು, ಹಣ್ಣು, ದ್ರಾಕ್ಷಿ, ಹತ್ತಿ, ತರಕಾರಿ, ಬೀಟ್ರೂಟ್ ಮುಖ್ಯ ಬೆಳೆ. ಸೋವಿಯತ್ ಒಕ್ಕೂಟದಲ್ಲಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಇದೇ. 1930ರಿಂದೀಚೆಗೆ ಇಲ್ಲಿ ನೀರಾವರಿ ಹೆಚ್ಚು ವಿಸ್ತರಿಸಿದೆ.

	ಟಾಷ್ಕೆಂಟ್-ಸೈಬೀರಿಯ ರೈಲುಮಾರ್ಗದ ನಿರ್ಮಾಣದಿಂದ ಕೈಗಾರಿಕೆಯ ಬೆಳೆವಣಿಗೆಯಾಗಿದೆ. ಸೈಬೀರಿಯದಿಂದ ಗೋದಿ, ಮರ, ಅರಣ್ಯವಸ್ತ್ತುಗಳು ಮತ್ತು ಇತರ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ಈಗ ಹೆಚ್ಚು ಅನುಕೂಲಗಳನ್ನು ಕಲ್ಪಿಸಲಾಗಿದೆ. ಆಹಾರ ಕೈಗಾರಿಕೆ ಮತ್ತ ಜವಳಿ ಕೈಗಾರಿಕೆಗಳಿಗೆ ಪ್ರಥಮ ಸ್ಥಾನ ದೊರಕಿದೆ. ಕಬ್ಬಿಣ, ಉಕ್ಕು, ತೈಲ ಮತ್ತು ತಾಮ್ರ ಶುದ್ಧೀಕರಣ, ರಾಸಾಯನಿಕ ಗೊಬ್ಬರ ಹಾಗೂ ವ್ಯವಸಾಯೋಪಕರಣ ತಯಾರಿಕೆಗಳೂ ಮುಖ್ಯವಾಗುತ್ತಿವೆ. ಕೈಗಾರಿಕೆಗೆ ಅಗತ್ಯವಾದ ಶಕ್ತಿಯಲ್ಲಿ ಶೇಕಡಾ ಭಾಗ ವಿದ್ಯುತ್ತು. ಇತ್ತೀಚೆಗೆ ಕೆಲವು ಕೈಗಾರಿಕೆಗಳಲ್ಲಿ ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲಗಳ ಉಪಯೋಗವೂ ಆಗುತ್ತಿದೆ. 
 
	ಸೋವಿಯತ್ ಮಧ್ಯ ಏಷ್ಯನ್ ಗಣರಾಜ್ಯಗಳ 1/3ರಷ್ಟಿರುವ ಉeóÉ್ಬಕಿಸ್ತಾನದಲ್ಲಿ ಅವುಗಳ ಒಟ್ಟು ಜನಸಂಖ್ಯೆಯ 2/3ರಷ್ಟು ಮಂದಿ ಇದ್ದಾರೆ. ಉಳಿದವಕ್ಕಿಂತ ಇದು ಆರ್ಥಿಕವಾಗಿ ಹೆಚ್ಚು ಮುಂದುವರಿದಿರುವುದೇ ಇದಕ್ಕೆ ಮುಖ್ಯ ಕಾರಣ.

	ಜನಸಂಖ್ಯೆ 81.05 ಲಕ್ಷದಲ್ಲಿ (1959) ಉeóÉ್ಬಕ್ ಜನರೇ ಹೆಚ್ಚು (62.2%) ಉಳಿದವರಲ್ಲಿ ರಷ್ಯನರು (13.5%) ಟಾರ್ಟರರು (5.5%), ಕಾಜಾóಕರು (4.1%) ಕಾಲಿಕರು (3.8%) ಮತ್ತು ಕಾರಕಲ್ಪಾಕರು (2.1%). ಒಟ್ಟು ಜನಸಂಖ್ಯೆಯಲ್ಲಿ ನೂರಕ್ಕೆ 40ರಷ್ಟು ಮಂದಿ ನಗರ ಮತ್ತು ಕೈಗಾರಿಗಾ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಉಳಿದವರು ಕೃಷಿ, ಪಶುಪಾಲನೆ ಮುಂತಾದ ಕಸಬುಗಳಲ್ಲಿ ತೊಡಗಿ ಹಳ್ಳಿಗಳಲ್ಲಿ ಜೀವಿಸುತ್ತಾರೆ. 1914ಕ್ಕೆ ಮೊದಲು 97%ರಷ್ಟು ಜನ ಅನಕ್ಷರಸ್ಥರಾಗಿದ್ದರು. 1965ರ ವೇಳೆಗೆ ಅನಕ್ಷರಸ್ಥರ ಪ್ರಮಾಣ 22%ಕ್ಕೆ ಇಳಿಯಿತು. ಶಾಲಾ ಕಾಲೇಜುಗಳಲ್ಲಿ ರಷ್ಯನ್ ಮತ್ತು ಉeóÉ್ಬಕ್ ಭಾಷೆಗಳು ಟಾಷ್ಕೆಂಟ್, ಸಮರ್ ಕಂಡ್ ಗಳಲ್ಲಿ ವಿಶ್ವವಿದ್ಯಾನಿಲಯಗಳಿವೆ.

	ಟಾಷ್ಕೆಂಟ್ ರಾಜಧಾನಿ, ಅತಿ ದೊಡ್ಡ ನಗರ, ಕೈಗಾರಿಗೆ ಮತ್ತು ವಾಣಿಜ್ಯ ಕೇಂದ್ರ. ಚಿರ್‍ಚಿಕ್ ನದಿಯ ದಡದಲ್ಲಿರುವ ಈ ನಗರ ಸಮುದ್ರಮಟ್ಟದಿಂದ 1,100 ಎತ್ತರದಲ್ಲಿದೆ. ಇದೊಂದು ಪ್ರಮುಖ ರೈಲ್ವೆ ಜಂಕ್ಷನ್. 

	ಸಮರ್ ಕಂಡ್ ಉeóÉ್ಬಕಿಸ್ತಾನದ ಹಳೆಯ ರಾಜಧಾನಿ. ಈ ಐತಿಹಾಸಿಕ ನಗರವೀಗ ಹೊಸ ರೂಪು ತಳೆದಿದೆ. ಹತ್ತಿ, ಉಣ್ಣೆ ಮತ್ತು ಯಂತ್ರೋಪಕರಣ ಕೈಗಾರಿಕೆಗಳ ಜೊತೆಜೊತೆಗೆ ಮುಸ್ಲಿಮರ ಪುರಾತನ ಮಸೀದಿಗಳೂ ಕ್ರಿ.ಪೂ. 5ನೆಯ ಶತಮಾನಕ್ಕೆ ಸೇರಿದ ವೀಕ್ಷಣಾಲಯವೂ ಇವೆ.

	ಬುಖಾರ ಪುರಾತನ ನಾಗರಿಕತೆಯ ಕೇಂದ್ರ. ಹಳೆಯ ನಗರದ ಸುತ್ತಲೂ ಇಟ್ಟಿಗೆಗಳಿಂದ ಕಟ್ಟಿದ ಕೋಟೆಯೂ ಹತ್ತಿ, ಉಣ್ಣೆ ಮತ್ತ ರೇಷ್ಮೆ ಗಿರಿಣಿಗಳೂ ಇವೆ. ಸ್ವಾಭಾವಿಕ ಅನಿಲಗಳ ದೊಡ್ಡ ನಿಕ್ಷೇಪವಿರುವುದು ಈ ನಗರದ ಸಮೀಪದಲ್ಲೇ. (ಜಿ.ಆರ್.ಆರ್.)

	ಇತಿಹಾಸ : ಹದಿಮೂರನೆಯ ಶತಮಾನದಲ್ಲಿ ಸ್ಥಾಪಿತವಾಗಿ, ರಷ್ಯದ ಬಹು ಭಾಗವನ್ನೂ ಒಳಗೊಂಡು, ಗೋಲ್ಡನ್‍ಹೋರ್ಡ್ ಅಥವಾ ಸ್ವರ್ಣದಳವೆಂದು ಪ್ರಸಿದ್ದವಾಗಿದ್ದ ಪಶ್ಚಿಮ ಮಂಗೋಲ್ ಚಕ್ರಾಧಿಪತ್ಯದ ಮುಖ್ಯನಾಗಿದ್ದ ಖಾನ್‍ಉeóÉ್ಬಕ್‍ನಿಂದ (1312-42) ಉeóÉ್ಬಕರಿಗೆ ಈ ಹೆಸರು ಬಂದಿದೆ. ಉeóÉ್ಬಕರ ಪೂರ್ವ ಚರಿತ್ರೆಗೆ ನೋಡಿ - ಗೋಲ್ಡನ್‍ಹೋರ್ಡ್: ತುರ್ಕಿಸ್ತಾನ.

	1917ರಲ್ಲಿ ರಷ್ಯನ್ ಕ್ರಾಂತಿ ಸಂಭವಿಸಿದಾಗ ಉeóÉ್ಬಕ್ ಜನ ರಷ್ಯನ್ ತುರ್ಕಿಸ್ತಾನದ ಸೀರ್ ದಾರ್ಯಾ, ಸಮರ್‍ಕಂಡ್, ಫರ್ಗನ, ಬುಖಾರ, ಚೀನಗಳಲ್ಲಿ ಹಂಚಿಹೋಗಿದ್ದರು. ಅವರದೂ ಒಂದು ರಾಷ್ಟ್ರವೆಂಬ ಕಲ್ಪನೆಯಿರಲಿಲ್ಲ; ಟಾಷ್ಕೆಂಟಿನಲ್ಲಿ ತುರ್ಕಿಸ್ತಾನದ ತಾತ್ಕಾಲಿಕ ಸರ್ಕಾರ ಸಮಿತಿಯೂ ಕಮ್ಯೂನಿಸ್ಟ್ ಹತೋಟಿಗೊಳಪಟ್ಟ ಕಾರ್ಮಿಕ ಸೈನಿಕ ರೈತ ಪ್ರತಿನಿಧಿ ಸಭೆಯೂ ಸ್ಥಾಪಿತವಾದುವು. 1917ರ ಡಿಸೆಂಬರಿನಲ್ಲಿ ಮುಸ್ಲಿಮರು ಕಾಕಾಂಟ್‍ನಲ್ಲಿ ರಾಷ್ಟ್ರೀಯ ಸಮ್ಮೇಳನವೊಂದನ್ನು ನಡೆಸಿ ಸ್ಥಾಪಿಸಿದ ಮುಸ್ಲಿಂ ಸರ್ಕಾರ 1918ರ ಫೆಬ್ರವರಿಯಲ್ಲಿ ಟಾಷ್ಕೆಂಟಿನಿಂದ ಬಂದ ಸೈನ್ಯದಿಂದ ಉರುಳಿಬಿತ್ತು. ಆಗ ಆ ಸುತ್ತಿನಲ್ಲಿ ಪ್ರಬಲನಾಗಿದ್ದ ರಷ್ಯನ್ ಪ್ರತಿಕ್ರಾಂತಿ ವೀರ ಅಡ್ಮಿರಲ್ ಕಾಲ್ಚಾಕನ ಸೈನಿಕ ಕಾರ್ಯಾಚರÀಣೆಯಿಂದಾಗಿ ತುರ್ಕಿಸ್ತಾನದ ಮೇಲೆ ರಷ್ಯನ್ ಹತೋಟಿಯಿರಲಿಲ್ಲ. 1919ರ ವಸಂತಕಾಲದಲ್ಲಿ ರಷ್ಯದ ಕೆಂಪುಸೇನೆ ಕಾಲ್ಚಾಕನನ್ನು ಸೋಲಿಸಿದ ಫಲವಾಗಿ ಆ ವರ್ಷದ ಕೊನೆಯ ವೇಳೆಗೆ ಇಡೀ ತುರ್ಕಿಸ್ತಾನ ಸೋವಿಯತ್ ಒಕ್ಕೂಟದ ವ್ಯಾಪ್ತಿಗೆ ಒಳಪಟ್ಟಿತು.

	ಆದರೆ ತುರ್ಕಿಸ್ತಾನದ ಜನಕ್ಕೂ ರಷ್ಯಕ್ಕೂ ನಡುವಣ ಸಂಬಂಧ ಸೌಹಾರ್ದಯುತವಾಗಿರಲಿಲ್ಲ. ಇದರಿಂದ ಲೆನಿನ್ ಕಳವಳಗೊಂಡ. ಟಾಷ್ಕೆಂಟಿನಲ್ಲಿ ಅಧಿಕಾರ ವಹಿಸಿಕೊಳ್ಳಲು ತುರ್ಕಿಸ್ತಾನ್ ನಿಯೋಗವೊಂದನ್ನು ಕಳಿಸಿದ. ಇದು ನಾನಾ ಸುಧಾರಣೆಗಳನ್ನು ಜಾರಿಗೆ ತಂದು ಮುಸ್ಲಿಮರ ಮನವೊಲಿಸಿಕೊಳ್ಳಲು ಯತ್ನಿಸಿತು. ಮೊದಮೊದಲು ಈ ಹೊಸ ಆಡಳಿತದ ವಿರುದ್ದವಾಗಿ ಬಂಡಾಯವೆದ್ದಿತ್ತಾದರೂ ಕ್ರಮೇಣ ಎಲ್ಲವೂ ಶಾಂತವಾಯಿತು. ಬುಖಾರ, ಖೀವಾ ರಾಜ್ಯಗಳು ಕ್ರಮೇಣ ಸಮಾಜವಾದಿ ಗಣರಾಜ್ಯಗಳಾದುವು (1924).

	1924ರಲ್ಲಿ ತುರ್ಕಿಸ್ತಾನ, ಖೀವಾ, ಬುಖಾರ ಗಣರಾಜ್ಯಗಳು ರದ್ದಾಗಿ ಅವುಗಳ ಸ್ಥಾನದಲ್ಲಿ ಸ್ಥಾಪಿತವಾದ ಗಣರಾಜ್ಯಗಳು ಐದು: ಉeóÉ್ಬಕಿಸ್ತಾನ್, ತಾಜಿಕಿಸ್ತಾನ್, ಕಿರ್ಗಿಷ, ಟರ್ಕ್‍ಮೆನಿಸ್ತಾನ್ ಮತ್ತ ಕಾಜಾಕ್‍ಸ್ತಾನ್. 1936ರಲ್ಲಿ ಉeóÉ್ಬಕಿಸ್ತಾನಕ್ಕೆ ಕಾರಕಲ್ಪಾಕ್ ಪ್ರದೇಶವನ್ನೂ 1956ರಲ್ಲಿ ಕಾeóÁಕ್‍ಸ್ತಾನದ ಕೆಲವು ಪ್ರದೇಶಗಳನ್ನೂ ಸೇರಿಸಿದ್ದರಿಂದ ಇದರ ವಿಸ್ತೀರ್ಣ ಹೆಚ್ಚಿತು. 1937-38ರಲ್ಲಿ ಇಲ್ಲಿ ನಡೆದಿತ್ತೆಂದು ಹೇಳಲಾದ ಒಳಸಂಚೊಂದು ಬಯಲಾಗಿ ಈ ರಾಜ್ಯದ ಮುಖ್ಯಮಂತ್ರಿಯೂ ಉeóÉ್ಬಕ್ ಕಮ್ಯೂನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿಯೂ ಸೇರಿ ಅನೇಕರು ಮರಣದಂಡನೆಗೆ ಗುರಿಯಾದರು.

	ಉeóÉ್ಬಕಿಸ್ತಾನದ ಸಂಸ್ಕøತಿ ಪುರಾತನವಾದದ್ದು, ಸಮರ್‍ಕಂಡ್, ಬುಖಾರಗಳಲ್ಲಿ ಅನೇಕ ಇಸ್ಲಾಮೀ ಶಿಲ್ಪಗಳಿವೆ. ಈಚೆಗೆ ಪಾಶ್ಚಾತ್ಯ ಶೈಲಿಗೆ ಹಳೆಯ ಸಂಪ್ರದಾಯದ ಶೈಲಿ ಬೆರೆಸುವ ಪ್ರಯತ್ನ ಸಾಗಿದೆ. ಅನೇಕ ಭವ್ಯ ಭವನಗಳ ನಿರ್ಮಾಣವಾಗುತ್ತಿದೆ.

	ಸೋವಿಯತ್ ಆಡಳಿತ ಬರುವ ಮುನ್ನ ಉಜೆóಕ್ ಸಾಹಿತ್ಯವೇ ಇರಲಿಲ್ಲ. ಆಗ ಅರಬ್ಬೀ ಹಾಗೂ ಪರ್ಷಿಯನ್ ಭಾಷೆಗಳೇ ಪ್ರಧಾನವಾಗಿದ್ದುವು. ಇವುಗಳ ಜೊತೆಗೆ ಪ್ರಚಾರದಲ್ಲಿದ್ದ ಚಾಗಟೈಯಿಂದ (ಮಧ್ಯಕಾಲೀನ ಮಧ್ಯ ಏಷ್ಯನ್ ಸಾಹಿತ್ಯಕ ಭಾಷೆ) 19ನೆಯ ಶತಮಾನದಲ್ಲಿ ಲಿಖಿತ ಉeóÉ್ಬಕ್ ಭಾಷೆ ಉದ್ಭವಿಸಿತು. ಆಲಿಷೇರ್ ನವಾಯ್ (1441-1501) ಉeóÉ್ಬಕ್ ಮಹಾಸಾಹಿತಿ.
											  
 (ಎಸ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ